ಓ ಮನವೇ ......!!
ಮುಂದೆ ಸಾಗು ಮನವೇ
ಕೆಚ್ಚೆದೆಯಿಂದ ನೀ
ಸತ್ಯವನರಿಯುವ ಭರದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ......
ಮುನ್ನಡೆದು ಅಜ್ಞಾನದ ಕತ್ತಲೆಯಲಿಹ
ಸಮಾಜದ ಬಾಗಿಲ ತಟ್ಟುತಲಿ
ಇದೊಂದೇ ನಿನ್ನ ಗುರಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ ......
ಮನ ಮುದುಡದಿರಲಿ
ಶಕ್ತಿ ಕುಂದದಿರಲಿ
ನೀ ನಡೆವ ದಾರಿ
ಸದಾ ಪ್ರಜ್ವಲಿಸಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .....
ನಿನಗುಂಟು ನಿನಗರಿಯದ ಬಲ
ನಂಬಿಕೆಯಲಿ ಹೋರಾಡು
ಜಯವಿದೆ ನಿನಗೆ
ಮುನ್ನುಗ್ಗು ಸ್ಥೈರ್ಯದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .......
ಮುಂದೆ ಸಾಗು ಮನವೇಕೆಚ್ಚೆದೆಯಿಂದ ನೀ
ಸತ್ಯವನರಿಯುವ ಭರದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ......
ಮುನ್ನಡೆದು ಅಜ್ಞಾನದ ಕತ್ತಲೆಯಲಿಹ
ಸಮಾಜದ ಬಾಗಿಲ ತಟ್ಟುತಲಿ
ಇದೊಂದೇ ನಿನ್ನ ಗುರಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ ......
ಮನ ಮುದುಡದಿರಲಿ
ಶಕ್ತಿ ಕುಂದದಿರಲಿ
ನೀ ನಡೆವ ದಾರಿ
ಸದಾ ಪ್ರಜ್ವಲಿಸಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .....
ನಿನಗುಂಟು ನಿನಗರಿಯದ ಬಲ
ನಂಬಿಕೆಯಲಿ ಹೋರಾಡು
ಜಯವಿದೆ ನಿನಗೆ
ಮುನ್ನುಗ್ಗು ಸ್ಥೈರ್ಯದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .......
No comments:
Post a Comment