Monday, 28 May 2012
Thursday, 29 March 2012
ಕನಸು ಹೊತ್ತ ಮಳೆ......
ಮಳೆಹನಿಗಳು ಸುರಿದ್ಯಾವೆ ನೋಡು
ಎಲ್ಲರ ಯೆದೆಯದು ಹರುಷದ ಬೀಡು
ಮಳೆಗಾಗಿ ಕಾದಿಹ ಚಿಲಿಪಿಲಿ ಹಕ್ಕಿಗಳ ಪಾಡು
ನೆರವೇರಿದೆ ಇಂದು ನೋಡು ....
ರೈತರು ಕಾದಿಹರು ಮಳೆಯ ಬರುವಿಕೆಗೆ
ಹಸಿರ ತೆನೆಗಳ ನೋಡಲು ಕಾದಿಹರು ಇಲ್ಲಿ
ಇಂದು ಬಿರುಸಲಿ ಸಾಗಿದೆ ಅವರ ಕಾರ್ಯ
ಅಮ್ಮನ ಕೈಯಲ್ಲಿ ಹಿರಿದಾದ ಬೆತ್ತ
ಅದ ಮರೆತು ಸಾಗಿದೆ ಮಕ್ಕಳ ಆಟ
ಸಾಗುತಿದೆ ಅಲ್ಲಲ್ಲಿ ಕಾಗದದ ದೋಣಿ
ಗುರಿ ಮರೆತು ಸಾಗಿದೆ ಅನಂತದೆಡೆಗೆ
ಗಿಡ ಮರಗಳ ಸಂತಸವ ನೋಡು
ಕಪ್ಪಿಟ್ಟ ಮೋಡಗಳ ಕಂಡು
ನವಿಲ ನರ್ತನವೂ ಸಾಗಿದೆ
ಬಂದೆ ಬಿಟ್ಟಿದೆ ಕನಸು ಹೊತ್ತ ಮಳೆ
ಕನಸುಗಳ ಸಾಕಾರಗೊಳಿಸಲು...
ಮಳೆಹನಿಗಳು ಸುರಿದ್ಯಾವೆ ನೋಡು
ಎಲ್ಲರ ಯೆದೆಯದು ಹರುಷದ ಬೀಡು
ಮಳೆಗಾಗಿ ಕಾದಿಹ ಚಿಲಿಪಿಲಿ ಹಕ್ಕಿಗಳ ಪಾಡುನೆರವೇರಿದೆ ಇಂದು ನೋಡು ....
ರೈತರು ಕಾದಿಹರು ಮಳೆಯ ಬರುವಿಕೆಗೆ
ಹಸಿರ ತೆನೆಗಳ ನೋಡಲು ಕಾದಿಹರು ಇಲ್ಲಿ
ಇಂದು ಬಿರುಸಲಿ ಸಾಗಿದೆ ಅವರ ಕಾರ್ಯ
ಅಮ್ಮನ ಕೈಯಲ್ಲಿ ಹಿರಿದಾದ ಬೆತ್ತ
ಅದ ಮರೆತು ಸಾಗಿದೆ ಮಕ್ಕಳ ಆಟ
ಸಾಗುತಿದೆ ಅಲ್ಲಲ್ಲಿ ಕಾಗದದ ದೋಣಿ
ಗುರಿ ಮರೆತು ಸಾಗಿದೆ ಅನಂತದೆಡೆಗೆ
ಗಿಡ ಮರಗಳ ಸಂತಸವ ನೋಡು
ಕಪ್ಪಿಟ್ಟ ಮೋಡಗಳ ಕಂಡು
ನವಿಲ ನರ್ತನವೂ ಸಾಗಿದೆ
ಬಂದೆ ಬಿಟ್ಟಿದೆ ಕನಸು ಹೊತ್ತ ಮಳೆ
ಕನಸುಗಳ ಸಾಕಾರಗೊಳಿಸಲು...
a poem to relax ur mind....
ಓ ಮನವೇ ......!!
ಮುಂದೆ ಸಾಗು ಮನವೇ
ಕೆಚ್ಚೆದೆಯಿಂದ ನೀ
ಸತ್ಯವನರಿಯುವ ಭರದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ......
ಮುನ್ನಡೆದು ಅಜ್ಞಾನದ ಕತ್ತಲೆಯಲಿಹ
ಸಮಾಜದ ಬಾಗಿಲ ತಟ್ಟುತಲಿ
ಇದೊಂದೇ ನಿನ್ನ ಗುರಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ ......
ಮನ ಮುದುಡದಿರಲಿ
ಶಕ್ತಿ ಕುಂದದಿರಲಿ
ನೀ ನಡೆವ ದಾರಿ
ಸದಾ ಪ್ರಜ್ವಲಿಸಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .....
ನಿನಗುಂಟು ನಿನಗರಿಯದ ಬಲ
ನಂಬಿಕೆಯಲಿ ಹೋರಾಡು
ಜಯವಿದೆ ನಿನಗೆ
ಮುನ್ನುಗ್ಗು ಸ್ಥೈರ್ಯದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .......
ಮುಂದೆ ಸಾಗು ಮನವೇಕೆಚ್ಚೆದೆಯಿಂದ ನೀ
ಸತ್ಯವನರಿಯುವ ಭರದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ......
ಮುನ್ನಡೆದು ಅಜ್ಞಾನದ ಕತ್ತಲೆಯಲಿಹ
ಸಮಾಜದ ಬಾಗಿಲ ತಟ್ಟುತಲಿ
ಇದೊಂದೇ ನಿನ್ನ ಗುರಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲೇ ......
ಮನ ಮುದುಡದಿರಲಿ
ಶಕ್ತಿ ಕುಂದದಿರಲಿ
ನೀ ನಡೆವ ದಾರಿ
ಸದಾ ಪ್ರಜ್ವಲಿಸಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .....
ನಿನಗುಂಟು ನಿನಗರಿಯದ ಬಲ
ನಂಬಿಕೆಯಲಿ ಹೋರಾಡು
ಜಯವಿದೆ ನಿನಗೆ
ಮುನ್ನುಗ್ಗು ಸ್ಥೈರ್ಯದಲಿ
ಜಗವ ಬೆಳಗಿಸು ನೀನು
ನಿನ್ನ ಪ್ರಖರತೆಯಿಂದಲಿ .......
Monday, 19 March 2012
Subscribe to:
Posts (Atom)



